ರಮಾಗೋವಿಂದ ರಂಗಮಂದಿರ
ನೃಪತುಂಗ ಸಾಂಸ್ಕೃತಿಕ ವೇದಿಕೆ
ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ
ರಮಾಗೋವಿಂದ ರಂಗಮಂದಿರ
ನೃಪತುಂಗ ಚಿಂತನ ಕಟ್ಟೆ
ಮೈಸೂರಿನಲ್ಲಿ ಪ್ರಥಮ ಬಾರಿಗೆ ಅತ್ಯಾಧುನಿಕ ಧ್ವನಿ-ಬೆಳಕಿನ ವ್ಯವಸ್ಥೆಯೊಂದಿಗೆ ಉತ್ತಮ ಗುಣಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಗುಣಮಟ್ಟದ ಚಿಂತನ-ಮಂಥನಕ್ಕೆ ಅರ್ಥಪೂರ್ಣ ವೇದಿಕೆ ಕಲ್ಪಿಸಲಾಗಿದೆ.
೩೫೦ ಆಸನಗಳುಳ್ಳ ಈ ರಂಗಮಂದಿರವು ನಾಟಕಗಳಿಗೆ ಹೇಳಿ ಮಾಡಿಸಿದಂತಿದೆ. ನೃತ್ಯ, ಸಂಗೀತಕ್ಕೂ ಬಳಸಿಕೊಳ್ಳಬಹುದಾದ ವಿಶಾಲ ವೇದಿಕೆಗೆ ಎಲ್‌ಇಡಿ, ಸ್ಪಾಟ್ ಲೈಟ್, ಫೋಕಸ್ ಲೈಟುಗಳಿವೆ. ೬೪ ದೀಪಗಳನ್ನು ಹಾಕಬಹುದಾದ ವ್ಯವಸ್ಥೆಯೂ ಇದೆ. ನಾಲ್ಕು ಲೈಟಿಂಗ್ ಕಂಟ್ರೋಲ್‌ಗಳೂ ಇವೆ. ಬ್ಯಾರಿಂಜರ್ ಸೌಂಡ್ ಸಿಸ್ಟಂನ ೩೨ ಮೈಕ್‌ಗಳ ಕಾರ್ಯವೈಖರಿಯನ್ನು ಕೇಳಿಯೇ ಆನಂದಿಸಬೇಕು. ರಂಗದ ಮೇಲೆ ಹಾಕಲು ಡಯಾಸ್‌ಗಳೂ, ಪೋಡಿಯಂಗಳು, ಸ್ಟೆಪ್ ಲಾಡರ್‌ಗಳೂ ಸಿದ್ಧವಾಗಿವೆ. ಬೆಳಕಿನ ಸಮಸ್ಯೆ ಉಂಟಾದಲ್ಲಿ, ಕ್ಯಾಟ್ ವಾಕ್ ಮೂಲಕ ಪರಿಹರಿಸಿಕೊಳ್ಳುವ ವ್ಯವಸ್ಥೆಯೂ ಇದೆ. ವೇದಿಕೆಯ ಹಿಂದೆ ಎರಡು ಸುಸಜ್ಜಿತ ಗ್ರೀನ್ ರೂಂಗಳು ಮತ್ತು ಒಂದು ಚೇಂಜ್ ರೂಂ ಲಭ್ಯ. ರಂಗದ ಮಗ್ಗುಲಲ್ಲಿ ‘ವಾಲ್ರ‍್ಯಾಕ್ ಡಿಮ್ಮರ್’ ಸಹ ಇದೆ.
ಪ್ರೇಕ್ಷಕರ ಹಿಂದೆ ಮೇಲ್ಭಾಗದಲ್ಲಿ ಕಟ್ಟಿರುವ ಕಂಟ್ರೋಲ್ ರೂಮಿನಲ್ಲಿ ಧ್ವನಿ-ಬೆಳಕುಗಳ ಅತ್ಯಾಧುನಿಕ ಪರಿಕರಗಳು ಲಭ್ಯ. ೩೨ ಚಾನೆಲ್ಲುಗಳ ೬೪ ಲೈಟುಗಳನ್ನು ಆ ಕ್ಷಣದಲ್ಲೇ ಬಳಸಬಹುದು. ಇಲ್ಲಿಂದಲೇ ೩೨ ಮೈಕುಗಳನ್ನೂ ನಿಯಂತ್ರಿಸಬಹುದು. ಮತ್ತೊಂದು ನೃಪತುಂಗ ಚಿಂತನ ಕಟ್ಟೆ ಎಂಬ ಚಿಕ್ಕ ಸಭಾಂಗಣ ಇದರೊಂದಿಗೆ ಇದೆ. ಇದರಲ್ಲಿ ೫೦ ಆಸನಗಳ ವ್ಯವಸ್ಥೆ ಇದೆ. ಇಲ್ಲಿ ಸಣ್ಣಪುಟ್ಟ, ಸೀಮಿತ ಜನಸಂಖ್ಯೆಯ ಸಭೆ ಸಮಾರಂಭಗಳನ್ನು ಆಯೋಜಿಸಲು ಅನುಕೂಲವಾಗಿದೆ.
ಇಲ್ಲಿ ಆಡಿಟೋರಿಯಂ ಬುಕಿಂಗ್ ಮಾಡಿ
kannadamana2021@gmail.com
6366709737(ಸಂಸ್ಥೆ),
9448361458(ಅಧ್ಯಕ್ಷರು),
9449942734(ಕಾರ್ಯದರ್ಶಿ),
9242829947(ಟ್ರಸ್ಟಿ),
6361848788(ಸಂಚಾಲಕರು)