ದೇಣಿಗೆ
ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ
ಅಂದು ೧೯೮೦ರ ದಶಕ. ಗೋಕಾಕ್ ಚಳುವಳಿ ಕನ್ನಡ ಭಾಷೆಯ ಉಳಿವಿಗಾಗಿ ನಡೆದ ಹೋರಾಟ. ಲಕ್ಷಾಂತರ ಜನ ಕನ್ನಡಿಗರು ಕನ್ನಡಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ನಡೆಸಿದ ಆಂದೋಲನ. ಇದರಿಂದ ಪ್ರೇರಣೆಗೊಂಡ ಕೆಲವು ಕನ್ನಡ ಕಾರ್ಯಕರ್ತರು ಮತ್ತು ಅಧ್ಯಾಪಕರು ಒಂದುಗೂಡಿ ಕನ್ನಡಮಾಧ್ಯಮದಲ್ಲಿ ಕಲಿಸುವ ಪ್ರತಿಷ್ಠಿತ ಗುಣಮಟ್ಟದ ಶಾಲೆಯನ್ನು ಸ್ಥಾಪಿಸುವ ನಿರ್ಧಾರವನ್ನು ೧೯೮೯ರಲ್ಲಿ ಕೈಗೊಂಡರು. ಅದರ ಫಲವಾಗಿ ಉಗಮಿಸಿದ ಟ್ರಸ್ಟ್ ‘ಕನ್ನಡ ವಿಕಾಸ ವಿದ್ಯಾಸಂಸ್ಥೆ’. ಇದರ ಅಡಿಯಲ್ಲಿ ಕನ್ನಡದ ಚಕ್ರವರ್ತಿ ನೃಪತುಂಗನ ಹೆಸರಿನಲ್ಲಿ ನಡೆಸುತ್ತಿರುವ ನಮ್ಮ ಶಾಲಾ ಸಂಸ್ಥೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾದ ಯೋಜನೆಯೇ ‘ಓದಿಗೆ ಆಸರೆ ಯೋಜನೆ’.
ನೃಪತುಂಗ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಗಳು
ಶಾಲಾ ವಿದ್ಯಾರ್ಥಿಗಳಿಗೆ – ವರ್ಷಕ್ಕೆ ೯೦೦೦/- ರೂಗಳು
ಕಾಲೇಜು ವಿದ್ಯಾರ್ಥಿಗಳಿಗೆ – ಓದಿಗೆ ಆಸರೆಗೆ

ಕನ್ನಡ ಮನಸ್ಸುಗಳ ಸಹಕಾರವೇ ಆಸರೆ
ಓದಿಗೆ ಆಸರೆ ಯೋಜನೆ
ಕೆಲವು ಕನ್ನಡ ಹೋರಾಟಗಾರರು ಮತ್ತು ಅಧ್ಯಾಪಕರುಗಳು ಕ್ರೋಢೀಕರಿಸಿದ ಅಲ್ಪ ಮೂಲಧನದೊಂದಿಗೆ ೧೯೮೯ರಂದು ಪ್ರಾರಂಭವಾದ ಈ ಸಂಸ್ಥೆಗೆ ಸಮಾಜದ ಎಲ್ಲಾ ಸ್ತರಗಳಿಂದಲೂ ಹಣ, ವಸ್ತು, ಪೀಠೋಪಕರಣಗಳ ರೂಪದಲ್ಲಿ ಸಹಾಯ ಸಹಕಾರ ಸಿಕ್ಕಿದೆ. ಸರಕಾರದಿಂದ ಬಂದ ೧ ಕೋಟಿ ಅನುದಾನ ದಿಂದ ಪದವಿಪೂರ್ವ ಕಾಲೇಜಿನ ಕಟ್ಟಡದ ನಿರ್ಮಾಣವಾಗಿದೆ. ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅನುದಾನದಿಂದ ವಿಜ್ಞಾನ ವಿಭಾಗದ ಪ್ರಯೋಗಾಲಯಗಳು ಮತ್ತು ಗಣಕ ಪ್ರಯೋಗಾಲಯ ಸುಸಜ್ಜಿತವಾಗಿದೆ. ದೇಶದ ಹೊರಗಿನ ಕನ್ನಡದ ಕಳಕಳಿಯ ಮಹನೀಯರು ಮತ್ತು ಸಂಘ ಸಂಸ್ಥೆಗಳಿಂದಲೂ ಕೊಡುಗೆ ದೊರೆತಿದೆ. ನಮ್ಮ ಈ ಕನ್ನಡದ ಆದರ್ಶ ಯಾವತ್ತೂ ಜನಾಧಾರಿತ, ಜನರಿಂದಲೇ ಯಶಸ್ಸು ಕಾಣಬೇಕಾಗಿದೆ. ನಿಮ್ಮ ಔದಾರ್ಯವೇ ನಮ್ಮ ಸೋಪಾನ.
ಒಬ್ಬ ವಿದ್ಯಾರ್ಥಿಯ ೧ ವರ್ಷದ ಶೈಕ್ಷಣಿಕ ವೆಚ್ಚವನ್ನು ಪ್ರಾಯೋಜಕರಿಂದ ಪಡೆದು ಆ ವಿದ್ಯಾರ್ಥಿಗೆ ಒಂದು ವರ್ಷ ಪೂರ್ತಿ ಉಚಿತ ಶಿಕ್ಷಣ ನೀಡುವುದು. ಇದುವರೆಗೂ ಒಬ್ಬ ವಿದ್ಯಾರ್ಥಿಗೆ “ಓದಿಗೆ ಆಸರೆ” ಮೊತ್ತವಾಗಿ ಸ್ವೀಕರಿಸುತ್ತಿದ್ದ ನಾಲ್ಕು ಸಾವಿರ ರೂ. ಗಳು ಇಂದಿನ ಖರ್ಚು-ವೆಚ್ಚಗಳಿಗೆ ಸರಿತೂಗದೆ ಇರುವುದರಿಂದ ಎಂಟು ಸಾವಿರ ರೂ. ಗಳನ್ನು ಒಬ್ಬ ವಿದ್ಯಾರ್ಥಿಗೆ ಇಬ್ಬರು ಪ್ರಾಯೋಜಕರಿಂದ (ತಲಾ ನಾಲ್ಕು ಸಾವಿರದಂತೆ) ಸ್ವೀಕರಿಸಲು ಉದ್ದೇಶಿಸಿದ್ದೇವೆ. ಒಬ್ಬರೇ ಇಚ್ಛೆಪಟ್ಟಲ್ಲಿ ಎಂಟು ಸಾವಿರ ರೂ. ಗಳನ್ನು ನೀಡಬಹುದು. “ಓದಿಗೆ ಆಸರೆಗೆ ಸಾರಿಗೆ” ಪ್ರಾಯೋಜಕತ್ವಕ್ಕೆ ವರ್ಷಕ್ಕೆ ೧೦೦೦ ರೂಪಾಯಿ ದೇಣಿಗೆ ನೀಡಬಹುದು.
ನಮ್ಮೊಂದಿಗೆ ಸಂಪರ್ಕದಲ್ಲಿರಿ!
ದೂರವಾಣಿ
6366709737(ಸಂಸ್ಥೆ),
9448361458(ಅಧ್ಯಕ್ಷರು),
9449942734(ಕಾರ್ಯದರ್ಶಿ),
9242829947(ಟ್ರಸ್ಟಿ),
6361848788(ಸಂಚಾಲಕರು)
ಇಮೇಲ್
kannadamana2021@gmail.com
ವಿಳಾಸ
ಸಿ ಎ 3, ಇ ಮತ್ತು ಎಫ್ ಬ್ಲಾಕ್, ರಾಮಕೃಷ್ಣನಗರ, ಮೈಸೂರು – ೫೭೦೦೨೨

ನಮ್ಮ ಉದ್ದೇಶವನ್ನು ಬೆಂಬಲಿಸಿ ದೇಣಿಗೆ ನೀಡಿ
ಇಂದೇ ದೇಣಿಗೆ ನೀಡುವ ಮೂಲಕ ನಮ್ಮ ಸಂಸ್ಥೆಗೆ ಸಹಾಯ ಮಾಡಿ!ಪ್ರತಿಯೊಂದು ದಾನವೂ ಬದಲಾವಣೆಯನ್ನು ತರುತ್ತದೆ.